ಗ್ರೂಫಿಯು ರವಿ ಅರ್ಜುನ್ ನಿರ್ದೇಶನದ 2021 ರ ಕನ್ನಡ ಭಾಷೆಯ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಚಿತ್ರದಲ್ಲಿ ಆರ್ಯನ್ ಎಸ್ ಜಿ, ಪದ್ಮಶ್ರೀ ಸಿ ಜೈನ್, ಗಗನ್ ಗೌಡ, ಉಮಾ ಮಯೂರಿ, ಪ್ರಜ್ವಲ್ ರಾಣಸಿಂಗ್, ಸಂಧ್ಯಾ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ವಿಜಯ್ ಕೃಷ್ಣ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರಕ್ಕೆ ಅಜಯ ಲಕ್ಷ್ಮೀಕಾಂತ ಅವರ ಛಾಯಾಗ್ರಹಣ ಮತ್ತು ವಿಜೇತ್ ಚಂದ್ರನ್ ಅವರ ಸಂಕಲನವಿದೆ. ಲಿಯಾ ಗ್ಲೋಬಲ್ ಮೀಡಿಯಾ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕೆ.ಜಿ. ಸ್ವಾಮಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. == ಪಾತ್ರವರ್ಗ == ಕಾರ್ತಿಕ್ ಪಾತ್ರದಲ್ಲಿ ಆರ್ಯನ್ ಎಸ್.ಜಿ ಭುವಿಯಾಗಿ ಪದ್ಮಶ್ರೀ ಸಿ ಜೈನ್ ಪುನಿತ್ ಪಾತ್ರದಲ್ಲಿ ಗಗನ್ ಗೌಡ ಪೂರ್ವಿಯಾಗಿ ಉಮಾ ಮಯೂರಿ ಶಶಾಂಕ್ ಪಾತ್ರದಲ್ಲಿ ಪ್ರಜ್ವಲ್ ರಾಣೆಸಿಂಗ್ ಸಾನಿಕಾ ಪಾತ್ರದಲ್ಲಿ ಸಂಧ್ಯಾ ಗೌಡ == ಬಾಹ್ಯ ಕೊಂಡಿಗಳು == ಗ್ರೌಫೀ @ ಐ ಎಮ್ ಡಿ ಬಿ == ಉಲ್ಲೇಖಗಳು ==